ಇಂದು ಮಕರಸಂಕ್ರಾಂತಿಯಲ್ವೇ, ಹಿರಣ್ಯದ ಮಹಿಷಂದಾಯ ಗುಡಿಯಲ್ಲಿ ತಂಬಿಲಸೇವೆ. ಸಂಜೆಯ ಹೊತ್ತು, ಸುಮಾರು ಐವತ್ತೂ ಜನ ಭಕ್ತಾದಿಗಳು ಸೇರಿ ಸಂಭ್ರಮದ ವಾತಾವರಣ.
ಪುರೋಹಿತರು ಪೂಜೆ ಆರಂಭಿಸುತ್ತಿದ್ದಂತೆ ನನ್ನ ಗಮನ ಸ್ಥಳದ ಬದಿಯಲ್ಲಿದ್ದ ತೆಂಗಿನ ಮಡಲ ಚಪ್ಪರದ ಕಡೆ ಹೋಯಿತು. ಆರೇಳು ತಿಂಗಳ ಹಿಂದೆ ಕಟ್ಟಿದ ಮಡಲ ಚಪ್ಪರ, ದೈವಸ್ಥಾನದ ಆರಂಭೋತ್ಸವದ ಕಾರ್ಯಕ್ರಮಗಳ ಅಂಗವಾಗಿ ಸಾಮಗ್ರಿಗಳನ್ನು ಇರಿಸಲೆಂದು ಹಾಕಿದ್ದ ತಾತ್ಕಾಲಿಕ ಚಪ್ಪರ, ಕಾರ್ಯಕರ್ತರು ನಂತರ ಅದರ ಗೊಡವೆಗೇ ಹೋಗಿಲ್ಲ. ಗುಡ್ಡದ ಯಾವುದೋ ಮೂಲೆಯಿಂದ ಹರಿದು ಬಂದ ನೆಲ ಮುಚ್ಚಲಬಳ್ಳಿ ಚಪ್ಪರವನ್ನು ಆವರಿಸಿದ ಪರಿಯಂತೂ ತ್ರೇತಾಯುಗದ ರಾಮಾಯಣದ ಅರಣ್ಯಕಾಂಡದಲ್ಲಿ ಸೀತಾರಾಮರ ಪರ್ಣಕುಟಿ ಕಣ್ಣೆದುರು ನಿಂತ ಹಾಗೆ!
MucunaBracteata ನೆಲ ಮುಚ್ಚಲಬಳ್ಳಿಯ ಸಸ್ಯಶಾಸ್ತ್ರೀಯ ಹೆಸರು. ರಬ್ಬರು ತೋಟಗಳಲ್ಲಿ ಈ ಬಳ್ಳಿಯನ್ನು ಬೆಳೆಸುವರು.
0 comments:
Post a Comment