Pages

Ads 468x60px

Monday, 21 February 2022

ಹಪ್ಪಳ ಗೊಜ್ಜು

 



ದಿಢೀರ್ ಅಡುಗೆ ಆಗಬೇಕೇ,

2 ಉದ್ದಿನ ಹಪ್ಪಳ ಕರಿಯಿರಿ.

ಕೈಯಲ್ಲಿ ಹುಡಿ ಮಾಡಿ,

ತಪಲೆಗೆ ಹಾಕಿ,

2 ಸೌಟು ದಪ್ಪ ಮೊಸರು ಎರೆಯಿರಿ.

ಶುಂಠಿ ಚಿಕ್ಕದಾಗಿ ಹೆಚ್ಚಿ ಹಾಕಿ,

ಹಸಿಮೆಣಸು ಕೂಡಾ ಹಾಕಬಹುದು.

ಮೇಲಿನಿಂದ ಪುಟ್ಟ ಒಗ್ಗರಣೆ ಚಟಪಟಾಯಿಸಿ,

ರುಚಿಗೆ ಸೂಕ್ತ ಪ್ರಮಾಣದಲ್ಲಿ ಉಪ್ಪು ಹಾಕಿ ಕಲಕುವಲ್ಲಿಗೆ ಈ ಪುಟ್ಟ ವ್ಯಂಜನ ಸಿದ್ಧವಾದಂತೆ.


ಮನೆಯಲ್ಲಿ ವಿಶೇಷ ಭೂರಿಭೋಜನ ಕಾರ್ಯಕ್ರಮಗಳಿದ್ದಾಗ ಹಪ್ಪಳ ಕರಿದದ್ದು ಉಳಿದೇ ಉಳಿಯುತ್ತದೆ.   ಗರಿಗರಿಯಿದ್ದಾಗಲೇ  ಗಾಳಿಯಾಡದ ಪ್ಲಾಸ್ಟಿಕ್ ಕವರ್ ಒಳಗೆ ಸಂಗ್ರಹಿಸಿಟ್ಟರೆ ಕೆಲವು ದಿನ ತಾಜಾ ಆಗಿ ಇರುತ್ತದೆ.  ಮತ್ತೂ ಮುಗಿಯಲಿಲ್ಲಾಂದರೆ ಈ ಥರ ಹಪ್ಪಳದ ಗೊಜ್ಜು ಸವಿಯಿರಿ. 



0 comments:

Post a Comment